PUC Scholarship:PUC ವಿದ್ಯಾರ್ಥಿಗಳಿಗಾಗಿ 15,000 ವಿದ್ಯಾರ್ಥಿ ವೇತನ!

PUC Scholarship:PUC ವಿದ್ಯಾರ್ಥಿಗಳಿಗಾಗಿ 15,000 ವಿದ್ಯಾರ್ಥಿ ವೇತನ!

ಎಲ್ಲರಿಗೂ ನಮಸ್ಕಾರ, ದ್ವಿತೀಯ ಪಿಯುಸಿ ಪೂರ್ಣಗೊಂಡಿರುವಂತಹ ವಿದ್ಯಾರ್ಥಿಗಳಿಗೆ ಇದೀಗ ಸರಕಾರದ ವತಿಯಿಂದ 15ರಿಂದ 20 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತಿದೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದ್ದು ಅರ್ಜಿ ಸಲ್ಲಿಸುವುದರ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿರುತ್ತದೆ. 

PUC Scholarship:PUC ವಿದ್ಯಾರ್ಥಿಗಳಿಗಾಗಿ 15,000 ವಿದ್ಯಾರ್ಥಿ ವೇತನ!

12ನೇ ತರಗತಿಯನ್ನು ಮುಗಿಸಿದ ನಂತರ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಹಣದ ಅವಶ್ಯಕತೆ ಇರುತ್ತದೆ ಆದರೆ ಬಡತನದಲ್ಲಿ ಮಧ್ಯಮದ ವರ್ಗದಲ್ಲಿ ಇರುವಂತಹ ಬಡವರ ಮಕ್ಕಳಿಗೆ ಹಣದ ಅವಶ್ಯಕತೆ ಬಹಳಷ್ಟು ಇರುತ್ತದೆ ಕೆಲವೊಬ್ಬರು ಹಣ ಇಲ್ಲದೆ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. 

ಇಂತಹ ವಿದ್ಯಾರ್ಥಿಗಳಿಗಾಗಿಯೇ ನಮ್ಮ ಒಂದು ಕರ್ನಾಟಕ ಸರ್ಕಾರವು ಅರ್ಧಕ್ಕೆ ಬಿಡುವ ಮಕ್ಕಳ ಶಿಕ್ಷಣವನ್ನ ಮುಂದುವರಿಸಲು ಸಹಾಯವಾಗಲೆಂದು ಹಲವಾರು ವಿದ್ಯಾರ್ಥಿಗಳಿಗೆ ಇದೀಗ ವಿದ್ಯಾರ್ಥಿ ವೇತನ ಯೋಜನೆಗಳನ್ನು ಬಿಡುಗಡೆ ಮಾಡಲಾಗಿದೆ. 

ಹಿಂದುಳಿದ ವರ್ಗದ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಸಬ್ಸಿಡಿ ಆಧಾರಿತ ಶಿಕ್ಷಣ ನೀಡುವಂತಹ ನಿಟ್ಟಿನಲ್ಲಿ ಈ ಒಂದು ಯೋಜನೆಗಳನ್ನು ರೂಪಿಸಿದ್ದು ಯೋಜನೆಯ ಮುಖ್ಯ ಉದ್ದೇಶವೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯೋಣ ಬನ್ನಿ. 

ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ 

ಬಡ ವಿದ್ಯಾರ್ಥಿಗಳು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಹಣದ ಅವಶ್ಯಕತೆ ಇರುವುದರಿಂದ ಈ ಯೋಜನೆಗಳನ್ನ ಬಿಡುಗಡೆ ಮಾಡಿದರ ಮೂಲಕ ಅವರಿಗೆ ಹಣದ ಅವಶ್ಯಕತೆಯನ್ನು ನೀಗಿಸಬಹುದು ಜೊತೆ ಜೊತೆಗೆ ತಾಂತ್ರಿಕ ಮತ್ತು ವೃತ್ತಿಪರ ಕೋಶಗಳಾಗಿ ಪ್ರೋತ್ಸಾಹ ನೀಡುವುದು ಈ ಒಂದು ಯೋಜನೆಗಳ ಮುಖ್ಯ ಉದ್ದೇಶವಾಗಿರುತ್ತದೆ. 

ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆಗಳು 

  • 12ನೇ ತರಗತಿಯ ಪೂರ್ಣಗೊಳಿಸಬೇಕು 
  • ವಿದ್ಯಾರ್ಥಿಯು ಸರಕಾರದ ಅಧೀನದಲ್ಲಿ ಬರುವಂತಹ ಯಾವುದೇ ಶಾಲಾ-ಕಾಲೇಜುಗಳಲ್ಲಿ ಓದುತ್ತಿರಬೇಕು 
  • ವಿದ್ಯಾರ್ಥಿಯು ಎಸ್ಸಿ ಎಸ್ಟಿ ಒಬಿಸಿ ಅಥವಾ ಮೈನಾರಿಟಿ ಜನರಲ್ ವರ್ಗಗಳಿಗೆ ಸೇರಿರಬೇಕು 
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಆದಾಯ ಮಿತಿ ವಾರ್ಷಿಕವಾಗಿ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು 
  • ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ವಯಸ್ಸು ಕನಿಷ್ಠ 17 ವರ್ಷಗಳು 

ಬೇಕಾಗುವ ದಾಖಲೆಗಳು ಯಾವ್ಯಾವು? 

  • ವಿದ್ಯಾರ್ಥಿ ಆಧಾರ್ ಕಾರ್ಡ್ 
  • ದ್ವಿತೀಯ ಪಿಯುಸಿಯ ಮಾರ್ಕ್ಸ್ ಸೀಟ್ 
  • ಜಾತಿ ಪ್ರಮಾಣ ಪತ್ರ 
  • ಆದಾಯ ಪ್ರಮಾಣ ಪತ್ರ 
  • ಬ್ಯಾಂಕ್ ಖಾತೆಯ ವಿವರ 
  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ಸ್ಥಳೀಯ ವಾಸದ ಪ್ರಮಾಣ ಪತ್ರ 

ವಿದ್ಯಾರ್ಥಿ ವೇತನದ ಮೊತ್ತ 

  • ಎಸ್ಸಿ ಹಾಗೂ ಎಷ್ಟು ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 5000ಗಳನ್ನು ಹಿಡಿದು 12 ಸಾವಿರ ರೂಪಾಯಿಗಳವರೆಗೆ ದೊರೆಯುತ್ತದೆ 
  • ಓಬಿಸಿ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 3000ಗಳಿಂದ 8,000ಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ 
  • ಮೈನಾರಿಟಿ ವರ್ಗದ ವಿದ್ಯಾರ್ಥಿಗಳಿಗೆ 4000 ಗಳಿಂದ 10 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ 

ಅರ್ಜಿ ಸಲ್ಲಿಸುವುದು ಹೇಗೆ? 

ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್ ಫೋನ್ ಅನ್ನು ಬಳಸಿಕೊಂಡು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು ಆದರೆ ಕೆಲವು ತಾಂತ್ರಿಕ ದೋಷಗಳಿಂದ ಅರ್ಜಿ ಸಲ್ಲಿಸಲು ತೊಂದರೆ ಆಗಬಹುದು ಆದಕಾರಣ ವಿದ್ಯಾರ್ಥಿಗಳು ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಎಸ್ ಎಸ್ ಪಿ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now

Leave a Comment