PMEGP Scheme:ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 9 ಲಕ್ಷ ರೂಪಾಯಿ ಉಚಿತ ಸಹಾಯಧನ!
ನಮಸ್ಕಾರ ಎಲ್ಲರಿಗೂ ಕೇಂದ್ರ ಸರ್ಕಾರದ ಒಂದು ಹೊಸ ಯೋಜನೆಯಲ್ಲಿ ಸುಮಾರು 9 ಲಕ್ಷ ರೂಪಾಯಿಗಳವರೆಗೆ(PMEGP Scheme) ಸಹಾಯಧನ ದೊರೆಯುತ್ತದೆ ಅದು ಹೇಗೆ ಎಂದು ತಿಳಿಯಬೇಕಾದರೆ ಅಥವಾ ತಿಳಿಯುವ ಆಸಕ್ತಿ ನಿಮ್ಮಲ್ಲಿ ಇದ್ದರೆ ಈ ಒಂದು ಲೇಖನವನ್ನು ಕೊನೆತನಕ ಓದಿ.
PMEGP Scheme:ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 9 ಲಕ್ಷ ರೂಪಾಯಿ ಉಚಿತ ಸಹಾಯಧನ!
ನಮ್ಮ ಒಂದು ಕೇಂದ್ರ ಸರ್ಕಾರವು ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ ಆ ಒಂದು ಯೋಜನೆಯ ಹೆಸರು ಏನೆಂದರೆ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಈ ಒಂದು ಯೋಜನೆಯ ಮುಖ್ಯ ಉದ್ದೇಶವೆಂದರೆ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವನ್ನು ಸೃಷ್ಟಿಸುವ ಮುಖ್ಯ ಗುರಿ.
10ನೇ ತರಗತಿ ಪರೀಕ್ಷೆ -3 ರ ಟೈಮ್ ಟೇಬಲ್ ಬಿಡುಗಡೆ!
ಈ ಒಂದು ಯೋಜನೆಯಲ್ಲಿ ಅರ್ಹತೆಯನ್ನು ಹೊಂದಿರುವಂತಹ ಅಭ್ಯರ್ಥಿಗಳು 26 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು ಜೊತೆಗೆ 9ರಿಂದ 10 ಲಕ್ಷ ರೂಪಾಯಿಗಳವರೆಗೆ ಒಂದು ಉಚಿತ ಸಹಾಯಧನ ಅಂದರೆ ಸಬ್ಸಿಡಿಯನ್ನು ಪಡೆಯಬಹುದಾಗಿದೆ. ಈ ಒಂಬತ್ತು ಲಕ್ಷ ರೂಪಾಯಿಗಳನ್ನು ನೀವು ಮರುಪಾವತಿ ಮಾಡುವಂತಿಲ್ಲ.
ಒಂದು ಯೋಜನೆಯ ಪ್ರಮುಖ ಉದ್ದೇಶವೆಂದರೆ ಭಾರತೀಯ ನಿರುದ್ಯೋಗಿ ಯುವಕರು ತಮ್ಮ ಒಂದು ಸ್ವಂತ ವ್ಯಾಪಾರವನ್ನು ನಡೆಸುವುದಕ್ಕೆ ಧನಸಹಾಯವನ್ನು ನೀಡುವುದಾಗಿದೆ ಇದರಿಂದ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು
- 18 ರಿಂದ 40 ವರ್ಷದ ಒಳಗಿನ ಯಾವುದೇ ನಿರುದ್ಯೋಗಿಗಳು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು
- ಎಸ್ಸಿ ಎಸ್ಟಿ ಒಬಿಸಿ ಹಾಗೂ ಮಹಿಳೆಯರು ಜೊತೆಗೆ ಅಂಗವಿಕಲರು ಹಾಗೂ ಗ್ರಾಮೀಣ ಪ್ರದೇಶದ ನಿವಾಸಿಗಳು ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 8ನೇ ತರಗತಿ ಪಾಸ್ ಆಗಿರಬೇಕಾಗುತ್ತದೆ
ಸಬ್ಸಿಡಿ ಯಾರಿಗೆ ಸಿಗುತ್ತದೆ…?
- ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವಂತಹ ನಿರುದ್ಯೋಗಿಗಳಿಗೆ ಶೇಕಡ 35 ರಷ್ಟು ಅಂದರೆ 8.76 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ದೊರೆಯುತ್ತದೆ
- ನಗರ ಪ್ರದೇಶದಲ್ಲಿ ವಾಸಿಸುತ್ತಿರುವಂತಹ ನಿರುದ್ಯೋಗಿಗಳಿಗೆ ಶೇಕಡ 25 ರಷ್ಟು ಅಂದರೆ 6.26 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ದೊರೆಯುತ್ತದೆ
- ಮಹಿಳೆಯರು ಎಸ್ಸಿ ಎಸ್ಟಿ ಹಾಗೂ ಅಂಗವಿಕಲರಿಗೆ ಹೆಚ್ಚುರಿಯಾಗಿ ಶೇಕಡ 11% ಸಹಾಯಧನವನ್ನು ನೀಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿಯನ್ನು ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.kviconline.gov.in/pmegpeportal/pmegphome/index.jsp
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಈ ಒಂದು ಯೋಜನೆಗೆ ಯಾವುದೇ ರೀತಿಯ ಕೊನೆಯ ದಿನಾಂಕ ಇರುವುದಿಲ್ಲ ಸತತವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.