PM Awas Yojana: ಬಡವರಿಗೆ ಸ್ವಂತ ಮನೆ ನಿರ್ಮಾಣ! ಪ್ರಧಾನ ಮಂತ್ರಿ ಆವಾಸ್ ಯೋಜನೆ!
ನಮಸ್ಕಾರ ಎಲ್ಲರಿಗೂ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿ ಅಲ್ಲಿ ಬಡವರಿಗೆ ಮನೆಯನ್ನ ನಿರ್ಮಾಣ ಮಾಡಿಕೊಡಲಾಗುತ್ತಿದೆ ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಖಂಡಿತವಾಗಿಯೂ ಕೂಡ ಮನೆ ಕಟ್ಟಿಸಲು ಹಣ ಸಹಾಯ ಸಿಗುತ್ತದೆ ಆದ್ದರಿಂದ ಬೇಗ ಅರ್ಜಿ ಸಲ್ಲಿಸಿ ಈ ಯೋಜನೆಯ ಕುರಿತಾದಂತಹ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆತನಕ ಓದಿ.
ಬಡವರಿಗೆ ಮನೆ ನಿರ್ಮಾಣ:
ಪ್ರಧಾನ ಮಂತ್ರಿ ಆವಾಸ್ ಯೋಜನೆ 2.0 ನ್ನು ಕೇಂದ್ರ ಸರ್ಕಾರವು ಬಡವರಿಗೆ ಮನೆ ಇಲ್ಲದವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ ಮನೆಯನ್ನು ನಿರ್ಮಿಸು ಸಲುವಾಗಿ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಒಂದು ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಜೊತೆಗೆ ಹಣಕಾಸು ನೆರವಿನಿಂದ ಮನೆಯನ್ನು ನಿರ್ಮಾಣ ಮಾಡುವುದಾಗಿದೆ.
ಬಡವರಿಗೆ ಮೊದಲ ಆದ್ಯತೆ:
ಸ್ನೇಹಿತರೆ ಈ ಒಂದು ಯೋಜನೆಯಲ್ಲಿ ಎರಡು ವಿಭಾಗಗಳನ್ನಾಗಿ ವಿಭಜಿಸಲಾಗಿದೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವಂತಹ ಬಡವರಿಗೆ ಇದಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ ಜೊತೆಗೆ ನಗರ ಪ್ರದೇಶಗಳಲ್ಲಿ ವಾಸಿಸುವಂಥ ಜನರಿಗೂ ಕೂಡ ಅವಕಾಶವನ್ನು ನೀಡಲಾಗಿದೆ
ಈ ಒಂದು ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಅಂದರೆ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ 1.7 ಲಕ್ಷದವರೆಗೆ ಅನುದಾನ ನೀಡಲಾಗುತ್ತದೆ ಜೊತೆಗೆ 6 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಕೇವಲ 5% ಬಡ್ಡಿ ದರದಲ್ಲಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರನ್ನು ಅಂಗವಿಕಲನ್ ಆಗಿರಬೇಕು ಅಥವಾ ಹಿರಿಯ ನಾಗರಿಕನಾಗಿರಬೇಕು ಇಲ್ಲವೇ ವಿಧವಾ ಮಹಿಳೆ ಆಗಿರಬೇಕು ಅಥವಾ ಅಸಂಘಟಿತ ಕಾರ್ಮಿಕರ ಆಗಿರಬೇಕು ಇಂಥವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ
ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ ಜೊತೆಗೆ ಈ ಹಿಂದೆ ಇತರೆ ಸರ್ಕಾರಿ ಯೋಜನೆಗಳಲ್ಲಿ ಮನೆಯ ಮೇಲೆ ಸಬ್ಸಿಡಿಯನ್ನು ಪಡೆದಿರಬಾರದು.
ಬೇಕಾಗುವ ದಾಖಲೆಗಳು:
- ಅರ್ಜಿದಾರನ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋಸ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:
ನೀವು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಳಗೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಿಮಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ತೊಂದರೆಯಾದರೆ ಸೈಬರ್ ಸೆಂಟರ್ಗೆ ಭೇಟಿ ನೀಡಿ.