NSP Scholarship: ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿ ವೇತನ!
ನಮಸ್ಕಾರ ಎಲ್ಲರಿಗೂ, ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ವತಿಯಿಂದ ವಿದ್ಯಾರ್ಥಿಗಳಿಗೆ 20000 ವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ. ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನು ಬೇಕಾಗೋ ದಾಖಲೆಗಳು ಏನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಕುರಿತಾದ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.
NSP Scholarship: ವಿದ್ಯಾರ್ಥಿಗಳಿಗೆ 20,000 ವಿದ್ಯಾರ್ಥಿ ವೇತನ!
ಭಾರತದಲ್ಲಿ ವಿದ್ಯಾರ್ಥಿಗಳಿಗಾಗಿ ಅನೇಕ ವಿದ್ಯಾರ್ಥಿ ವೇತನ ಯೋಜನೆಗಳಿದ್ದು ಅದರಲ್ಲಿ ಪ್ರಮುಖವಾದ ಯೋಜನೆ ಎಂದರೆ ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ದೊರೆಯುವ ಎನ್ ಎಸ್ ಪಿ ಸ್ಕಾಲರ್ಶಿಪ್ ಅಂದರೆ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್. ಈ ಒಂದು ವಿದ್ಯಾರ್ಥಿ ವೇತನದ ವತಿಯಿಂದ ವಿದ್ಯಾರ್ಥಿಗಳಿಗೆ ಸರಿ ಸುಮಾರು 20 ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ.
ಪಶು ಪಾಲನೆಗಾಗಿ ರೈತರಿಗೆ 2 ಲಕ್ಷ ಸಬ್ಸಿಡಿ! ಬೇಗ ಅರ್ಜಿ ಸಲ್ಲಿಸಿ!
ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದು ಶೈಕ್ಷಣಿಕ ವಾಗಿ ಮುಂದುವರೆಯಲು ಬಯಸುವಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆ ಬಾರದಿರಲಿ ಎಂದು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದ್ದು ಈಗಾಗಲೇ ಈ ಒಂದು ಸ್ಕಾಲರ್ಷಿಪ್ನ ವತಿಯಿಂದ ಹಲವಾರು ವಿದ್ಯಾರ್ಥಿಗಳು ಲಾಭವನ್ನು ಪಡೆದಿರುತ್ತಾರೆ.
NSP ಸ್ಕಾಲರ್ ಶಿಪ್ ನ ಮುಖ್ಯ ಉದ್ದೇಶ ಏನು?
ಮಧ್ಯಮ ವರ್ಗದ ಹಾಗೂ ಬಡ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡಿ ಶಿಕ್ಷಣದ ಸಮಾನ ಅವಕಾಶವನ್ನು ಕಲ್ಪಿಸಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗುವಂತಹ ಡಿಜಿಟಲ್ ವೈವಾಟ ಮೂಲಕ ಸುಲಭ ಅರ್ಜಿಯನ್ನ ತೆಗೆದುಕೊಂಡು ವಿದ್ಯಾರ್ಥಿ ವೇತನವನ್ನು ನೀಡುವುದಾಗಿದೆ.
ರೈತರಿಗೆ ಸಿಹಿ ಸುದ್ದಿ! ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಬೆಳೆ ನಷ್ಟಕ್ಕೆ ಧನಸಹಾಯ!
NSP ಸ್ಕಾಲರ್ ಶಿಪ್ ನ ವಿವರ
- ಈ ಒಂದು ವಿದ್ಯಾರ್ಥಿ ವೇತನವನ್ನು ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ವಿದ್ಯಾರ್ಥಿಗಳಿಗೆ ಪ್ರೇ ಮ್ಯಾಟ್ರಿಕ್ ಸ್ಕಾಲರ್ಶಿಪ್ ಎಂದು ನೀಡಲಾಗುತ್ತದೆ
- 11ನೇ ತರಗತಿ ಹಾಗೂ ನಂತರದ ಕೋರ್ಸುಗಳಿಗಾಗಿ ಪೋಸ್ಟ್ ಮ್ಯಾಟ್ರಿಕ್ ವಿದ್ಯಾರ್ಥಿ ವೇತನವೆಂದು ನೀಡಲಾಗುತ್ತದೆ.
- ಇದಾದ ಮೇಲೆ ಮೆರಿಟ್ಕಮ್ ಮೀನ್ಸ್ ವಿದ್ಯಾರ್ಥಿ ವೇತನ ಅಡಿಯಲ್ಲಿ ವೃತ್ತಿಪರ ಕೋಶಗಳಿಗೆ ಅರ್ಜಿ ಹಾಕಿರುವಂತಹ ವಿದ್ಯಾರ್ಥಿಗಳಿಗೆ ಕೂಡ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ವಿದ್ಯಾರ್ಥಿಯು ಭಾರತೀಯ ನಾಗರಿಕನಾಗಿರಬೇಕು ಭಾರತದಲ್ಲಿ ವಾಸಿಸುತ್ತಿರಬೇಕು
- ಈ ಒಂದು ಯೋಜನೆಯಲ್ಲಿ ಹಲವಾರು ವಿದ್ಯಾರ್ಥಿ ವೇತನದ ವಿಧಗಳಿದ್ದು ಅದಕ್ಕೆ ತಕ್ಕಂತೆ ಶಿಕ್ಷಣವನ್ನು ಹೊಂದಿರಬೇಕು
- ಕುಟುಂಬದ ಆದಾಯ ಮಿತಿ ವರ್ಷಕ್ಕೆ 2.5 ಲಕ್ಷದ ಒಳಗೆ ಇರಬೇಕಾಗುತ್ತದೆ ಅಂತ ವಿದ್ಯಾರ್ಥಿ ಅರ್ಜಿ ಸಲ್ಲಿಸಬಹುದು
- ಸರ್ಕಾರದಿಂದ ಮಾನ್ಯತೆ ಪಡೆದಂತಹ ಯಾವುದೇ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಯು ವಿದ್ಯಾಭ್ಯಾಸವನ್ನು ಮಾಡುತ್ತಿರಬೇಕು
ಬೇಕಾಗುವ ದಾಖಲೆಗಳು
- ವಿದ್ಯಾರ್ಥಿ ಆಧಾರ್ ಕಾರ್ಡ್
- ಕಾಲೇಜ್ ಬೊನಾಫೈಡ್ ಸರ್ಟಿಫಿಕೇಟ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರಗಳು
- ಪಾಸ್ಪೋರ್ಟ್ ಸೈಜ್ ಛಾಯಾಚಿತ್ರಗಳು
ಅರ್ಜಿ ಸಲ್ಲಿಸುವ ವಿಧಾನ
ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಲು ನೀವು ಎನ್ ಎಸ್ ಪಿ ಅಂದರೆ ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ ನೀವೆನಾದರೂ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ತೊಂದರೆ ಆದರೆ ಹತ್ತಿರದ ಸೈಬರ್ ಸೆಂಟರ್ ಗೆ ಭೇಟಿ ನೀಡಿ ಇಲ್ಲವೇ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಸ್ಮಾರ್ಟ್ಫೋನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ ದಿನಾಂಕ ಜುಲೈ 15 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30 2025
ವಿದ್ಯಾರ್ಥಿ ವೇತನದ ಮೊತ್ತ
- ಒಂದರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂಪಾಯಿಗಳಿಂದ ಆರು ಸಾವಿರ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ
- 11ನೇ ತರಗತಿ ಹಾಗೂ ನಂತರದ ಕೋರ್ಸ್ ಗಳಿಗಾಗಿ 5000 ಗಳಿಂದ 12,000ಗಳವರೆಗೆ ವಿದ್ಯಾರ್ಥಿ ವೇತನ
- ಮೆರಿಟ್ ಕಮ್ ಮೀನ್ಸ್ ವಿದ್ಯಾರ್ಥಿಗಳಿಗಾಗಿ 20,000 ವಿದ್ಯಾರ್ಥಿ ವೇತನ ನೀಡುವುದರ ಜೊತೆಗೆ ಹಾಸ್ಟೆಲ್ ಶುಲ್ಕ ಉಚಿತವಾಗಿ ನೀಡಲಾಗುತ್ತದೆ.