Mobile Canteen Subsidy: ನಿರುದ್ಯೋಗಿಗಳಿಗೆ ಮೊಬೈಲ್ ಕ್ಯಾಂಟೀನ್ ಆರಂಭಿಸಲು 5 ಲಕ್ಷ ಸಹಾಯಧನ! ಇಲ್ಲಿದೆ ಡೀಟೇಲ್ಸ್!
ಕರ್ನಾಟಕ ರಾಜ್ಯದ ಸಮಸ್ತ ಜನತೆಗೆ ನಮಸ್ಕಾರಗಳು, ಈ ಲೇಖನದ ಮೂಲಕ ತಿಳಿಸುವುದೇನೆಂದರೆ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ವಿದ್ಯಾಭ್ಯಾಸವನ್ನು ಮುಗಿಸಿ ನಿರುದ್ಯೋಗ ಹೊಂದಿರುವಂತಹ ಮತ್ತು ಯುವಕರನ್ನು ಉದ್ಯಮಶೀಲರನ್ನಾಗಿ ಪ್ರರಣ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ 5 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ಮೊಬೈಲ್ ಕ್ಯಾಂಟೀನ್ ಸಹಾಯಧನ (Mobile Canteen Subsidy) ಯೋಜನೆ:
ನಿರುದ್ಯೋಗ ಹೊಂದಿರುವಂತಹ ಯುವಕರಲ್ಲಿ ತಾವು ಸ್ವಂತ ಉದ್ಯೋಗಕ್ಕೆ ಉದ್ಯೋಜನ ನೀಡುವುದಾಗಿ ಪ್ರವಾಸೋದ್ಯಮ ಇಲಾಖೆಯು ಬೆಂಬಲ ನೀಡುವಂತಹ ನಿಟ್ಟಿನಲ್ಲಿ ಹಾಗೂ ವ್ಯಾಪಾರ ಬೆಳವಣಿಗೆಗೆ ಸಹಾಯ ಒದಗಿಸುವಂತಹ ನಿಟ್ಟಿನಲ್ಲಿ ಊಟದ ವಾಹನಗಳ ಮೇಲೆ ತ್ವರಿತ ಸೇವೆಯ ವ್ಯವಸ್ಥೆಯನ್ನು ಒದಗಿಸುವ ರೀತಿಯಲ್ಲಿ ಪ್ರೋತ್ಸಾಹಿಸುವ ಮುಖ್ಯ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ.
ಮಹಿಳೆಯರಿಗೆ ಸ್ವಯಂ ಉದ್ಯೋಗ ನಡೆಸಲು ₹200,000/- ವರಗೆ ಸಹಾಯಧನ! ಬೇಗ ಅರ್ಜಿ ಸಲ್ಲಿಸಿ!
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗುವಂತಹ ಫಲಾನುಭವಿಗಳಿಗೆ ಗರಿಷ್ಠ 5 ಲಕ್ಷದವರೆಗೆ ಸಹಾಯ ಧನ ಸಿಗುತ್ತದೆ. ಘಟಕ ವೆಚ್ಚದ 70% ನಷ್ಟು ಹಣವನ್ನು ಸರ್ಕಾರವು ನೀಡುತ್ತದೆ. ಇನ್ನುಳಿದಿರುವಂತಹ ಹಣದ ಮೊತ್ತವನ್ನು ಫಲಾನುಭವಿಯು ತನ್ನ ಸ್ವಂತ ಹಣ ಅಥವಾ ಬ್ಯಾಂಕ್ ಸಾಲದಿಂದ ಜೋಡಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:
- 20 ರಿಂದ 45 ವರ್ಷ ವಯಸ್ಸಿನ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.
- 10ನೇ ತರಗತಿ ಕನಿಷ್ಠ ಪಾಸ್ ಆಗಿರಬೇಕು.
- ಲಘು ವಾಹನ ಚಾಲನಾ ಪರವಾನಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹೊಂದಿರಬೇಕು.
- ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯ ಆದಾಯ ಮಿತಿಯು 2 ಲಕ್ಷ ಮೀರಿರಬಾರದು.
- ಅರ್ಜಿದಾರರ ಕುಟುಂಬದಲ್ಲಿ ಸರ್ಕಾರಿ ನೌಕರರು ಇರಬಾರದು.
- ಕರ್ನಾಟಕ ರಾಜ್ಯದ ನಿವಾಸಿಯಾಗಿ ಮತ್ತು SC/ST ಸಮುದಾಯಕ್ಕೆ ಸೇರಿದವರಿಗೆ ಅವಕಾಶ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಅರ್ಜಿಯ ನಮೂನೆ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್
- ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೆ ಇರುವಂತಹ ಆಸಕ್ತ ಅಭ್ಯರ್ಥಿಗಳು ಮೊಬೈಲ್ ಕ್ಯಾಂಟೀನ್ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದು ಬಯಸಿದರೆ ನಿಮ್ಮ ಹತ್ತಿರ ಇರುವಂತಹ ಜಿಲ್ಲಾ ಪ್ರವಾಸೋದ್ಯಮ ಕಚೇರಿಗೆ ಭೇಟಿ ನೀಡಿ ಅರ್ಜಿಯ ನಮೂನೆಯನ್ನು ತೆಗೆದುಕೊಂಡು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ನೀವು ಸಲ್ಲಿಸಿರುವಂತಹ ಅರ್ಜಿಯು ಪರಿಶೀಲನೆ ನಂತರ ಒಂದು ತಿಂಗಳ ನಂತರ ಉದ್ಯಮಶೀಲತೆ ತರಬೇತಿಗೆ ಕರೆ ನೀಡಲಾಗುತ್ತದೆ ನಂತರ ನೀವು ಯಶಸ್ವಿಯಾಗಿ ಹಾಜರಾದರೆ ಸಹಾಯಧನ ಬಿಡುಗಡೆ ಮಾಡಲಾಗುವುದು.
ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!
ಈ ಯೋಜನೆಯ ಮೂಲಕ 5 ಲಕ್ಷದವರೆಗೆ ಹಣಕಾಸು ನೆರವನ್ನು ಪಡೆಯಬಹುದಾಗಿದೆ ಮತ್ತು ತರಬೇತಿಯ ಸಂದರ್ಭದಲ್ಲಿ ಉಚಿತ ಊಟದ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆಯನ್ನು ನೀಡಲಾಗುತ್ತದೆ. ಇದರ ಜೊತೆ ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಅವಕಾಶ ಪಡೆಯಬಹುದಾಗಿದೆ. ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಣ್ಣ ಉದ್ಯಮಕ್ಕೆ ಸರ್ಕಾರದ ಮಾನ್ಯತೆಯನ್ನು ಪಡೆಯಬಹುದು.