IDFC First Scholarship:ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ!
ಎಲ್ಲರಿಗೂ ನಮಸ್ಕಾರ, ವಿದ್ಯಾರ್ಥಿಗಳಿಗೆ ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ವತಿಯಿಂದ 50,000ಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ ನೀವು ಈ ಒಂದು ವಿದ್ಯಾರ್ಥಿ ವೇತನದ ಸಂಪೂರ್ಣ ಮಾಹಿತಿಯನ್ನು ತಿಳಿಯಬೇಕಾದರೆ ಈ ಲೇಖನವನ್ನ ಕೊನೆತನಕ ಓದಿ.
IDFC First Scholarship:ವಿದ್ಯಾರ್ಥಿಗಳಿಗೆ ₹50,000/- ವಿದ್ಯಾರ್ಥಿ ವೇತನ!
IDFC First ಬ್ಯಾಂಕ್(IDFC First Scholarship)ಏನಿದೆ ಇದು ಭಾರತದಲ್ಲಿ ಸಾಮಾಜಿಕ ಹೊಣೆಗಾರಿಕೆ ಹಾಗೂ ಪ್ರಾಮುಖ್ಯತೆಯನ್ನು ನೀಡುವ ಪ್ರಮುಖ ಬ್ಯಾಂಕುಗಳಲ್ಲಿ ಶಿಕ್ಷಣದ ಹಕ್ಕನ್ನ ಎಲ್ಲರಿಗೂ ಸಮಾನವಾಗಿ ಹಂಚುವ ಅಥವಾ ಒದಗಿಸುವ ನಿಟ್ಟಿನಲ್ಲಿ ಈ ಒಂದು ಬ್ಯಾಂಕಿ ಏನಿದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!
ಈ ಒಂದು ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ ಆರ್ಥಿಕವಾಗಿ ಹಿಂದುಳಿದಂತಹ ಹಿಂದುಳಿದಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಶಿಕ್ಷಣದ ಅವಕಾಶವನ್ನು ಕಲ್ಪಿಸುವುದಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
ಮಾನದಂಡ | ವಿವರ |
---|---|
ಪಠ್ಯಕ್ರಮ | ಪದವಿ ಅಥವಾ ಪಿಜಿ ಕೋರ್ಸ್ (Professional / Non-professional) ಓದುತ್ತಿರುವ ವಿದ್ಯಾರ್ಥಿಗಳು |
ವಯಸ್ಸು | ಕನಿಷ್ಠ 18 ವರ್ಷ |
ಕುಟುಂಬದ ವಾರ್ಷಿಕ ಆದಾಯ | ₹6 ಲಕ್ಷಕ್ಕಿಂತ ಕಡಿಮೆ ಆಗಿರಬೇಕು |
ಶಾಲಾ/ಕಾಲೇಜು ಪ್ರಮಾಣ | ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಓದುತ್ತಿರಬೇಕು |
ಶೈಕ್ಷಣಿಕ ಸಾಧನೆ | ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕ ಪಡೆದಿರಬೇಕು |
ಈ ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶ
- ಆರ್ಥಿಕವಾಗಿ ಹಿಂದುಳಿದಂತಹ ಬಡ ವಿದ್ಯಾರ್ಥಿಗಳಿಗೆ ಪದವಿ/ಪೋಸ್ಟ್ ಗ್ರಾಜುಯೇಷನ್ ಓದಲು ಆರ್ಥಿಕ ಸಹಾಯವನ್ನು ನೀಡುವುದಾಗಿದೆ
- ಶಿಕ್ಷಣದಲ್ಲಿ ಸಮಾನತೆಯನ್ನು ತರುವಂತ ಮುಖ್ಯ ಪ್ರಯತ್ನ
- ಉನ್ನತ ಶಿಕ್ಷಣವನ್ನು ಪಡೆಯುತ್ತಿರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನಸಹಾಯವನ್ನು ಮಾಡುವುದಾಗಿದೆ
ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!
ಈ ಯೋಜನೆಯ ಲಾಭಗಳು
- ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ ವರ್ಷಕ್ಕೆ 10,000 ಗಳಿಂದ ಹಿಡಿದು 50,000 ಗಳವರೆಗೆ ವಿದ್ಯಾರ್ಥಿ ವೇತನ ದೊರೆಯುತ್ತದೆ
- ಹೀಗೆ ದೊರೆಯುವಂತಹ ಹಣದಿಂದ ಕಾಲೇಜು ಪೀಸ್ ಪಾವತಿಸಬಹುದು ಪುಸ್ತಕ ಖರೀದಿಗೆ ಉಪಯೋಗಿಸಬಹುದು ಅಥವಾ ಹಾಸ್ಟಲಿನಲ್ಲಿ ಓದುತ್ತಿದ್ದರೆ ಊಟದ ಖರ್ಚು ಸೇರಿದಂತೆ ವಿವಿಧ ಶೈಕ್ಷಣಿಕ ಅವಶ್ಯಕತೆ ಈ ಹಣವನ್ನ ಬಳಸಬಹುದಾಗಿದೆ
- ಶೈಕ್ಷಣಿಕ ವರ್ಷ ಪೂರೈಸಿದ ನಂತರ ಹೊಸ ವರ್ಷಕ್ಕೂ ಮುಂದುವರೆಯಲು ಈ ಹಣ ಸಹಾಯ ಮಾಡುತ್ತದೆ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ https://www.idfcfirstbank.com/ ಕ್ಲಿಕ್ ಮಾಡಿ ಬೇಟಿ ನೀಡಿ
- ಸ್ಕಾಲರ್ಷಿಪ್ ಎಂದು ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅದಾದ ಮೇಲೆ ನಿಮಗೆ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಒಂದು ಫಾರಂ ಓಪನ್ ಆಗುತ್ತದೆ
- ಅದರಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಕೇಳಿರೋ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆಗಳು
- ವಿದ್ಯಾರ್ಥಿ ಆಧಾರ್ ಕಾರ್ಡ್
- ಶಾಲೆಗೆ ದಾಖಲಾದ ಪತ್ರ
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಸೈಜ್ ಫೋಟೋ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/08/2025
- ಫಲಿತಾಂಶ ಪ್ರಕಟಣೆ 01/09/2025