Govt Employees: ಸರ್ಕಾರಿ ನೌಕರರ ತುಟ್ಟಿಭತ್ಯೆ ಜುಲೈ ತಿಂಗಳಿನಿಂದ 3% ಹೆಚ್ಚಳ! ಇಲ್ಲಿದೆ ಪರಿಪೂರ್ಣ ಮಾಹಿತಿ!
ನಮಸ್ಕಾರ ಕರ್ನಾಟಕದ ಜನತೆಗೆ, ಇದೇ ಮುಂಬರುವಂತಹ ಜುಲೈ ತಿಂಗಳಿನಿಂದ ಸರ್ಕಾರಿ ನೌಕರರ ತೊಟ್ಟಿ ಭತ್ಯೆ ಹೆಚ್ಚಳವಾಗಲಿದ್ದು, ಇದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಅನ್ನು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ. ಆದ್ದರಿಂದ ಪೂರ್ತಿ ಮಾಹಿತಿ ತಿಳಿಯಬೇಕೆಂಬ ಅವರು ಲೇಖನವನ್ನು ಕೊನೆಯವರೆಗೂ ಓದಿ. ಕಂಪ್ಲೀಟ್ ಡೀಟೇಲ್ಸ್ ನಿಮಗೆ ತಿಳಿಯುತ್ತದೆ.
ಜಿಯೋ ಗ್ರಾಹಕರಿಗೆ ಬಂಪರ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್!
ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಂದು ಗುಡ್ ನ್ಯೂಸ್ ಹೇಳಬಹುದು. ಈ ವರ್ಷದ ಜುಲೈ ತಿಂಗಳಿನಲ್ಲಿ ತುಟಿ ಬತ್ತೆಯು ಶೇಕಡ 3% ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮಾಹಿತಿಗಳ ಮೂಲಕ ತಿಳಿದು ಬಂದಿದೆ.
ಈ ಕಾರಣದಿಂದಾಗಿ ಡಿಎ ಶೇಕಡ 55% ನಿಂದ 58% ಗೆ ಏರಿಕೆಯಾಗುವಂತಹ ಸಾಧ್ಯತೆ ಇದೆ. ಈ ಡಿಎ ಏರಿಕೆಯು ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದಲ್ಲಿ ಜಾರಿಗೆ ಬರುವಂತಹ ಕೊನೆಯ ಡಿಎ ಪರಿಷ್ಕರಣೆ ಎಂಬ ಮಾಹಿತಿಯು ತಿಳಿದುಬಂದಿರುತ್ತದೆ.
Govt Employees ಡಿಎ (DA) ಹೆಚ್ಚಳವಾಗುತ್ತಿರುವುದಕ್ಕೆ ಸರಿಯಾದ ಕಾರಣ:
ಸದ್ಯಕ್ಕೆ ತಿಳಿದು ಬಂದಿರುವಂತಹ ಮಾಹಿತಿಗಳ ಪ್ರಕಾರ ಹೇಳುವುದಾದರೆ, ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಕೈಗಾರಿಕಾ ಕಾರ್ಮಿಕರಿಗೆ ಅಂಕಿ ಅಂಶಗಳ ಆಧಾರದ ಮೇಲೆ ಡಿಎ ಪರಿಷ್ಕರಣೆಯು ಇರುತ್ತದೆ ಎಂಬ ಮಾಹಿತಿ ನಿಮಗೆಲ್ಲ ಗೊತ್ತಿದೆ. ಈ ಸೂಚ್ಯಂಕವು ರಾಷ್ಟ್ರದ ಕಾರ್ಮಿಕರ ದಿನನಿತ್ಯ ಜೀವನದ ವೆಚ್ಚವನ್ನು ಪ್ರತಿಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿರಂತರವಾಗಿ ಸೂಚ್ಯಂಕ ಏರುತ್ತಿರುವ ಕಾರಣದಿಂದಾಗಿ ಡಿಎ ಹೆಚ್ಚಳಕ್ಕೆ ಕಾರಣವಾಗಿದೆ.
ಡಿಎ ಹೆಚ್ಚಳದ ಕಾರಣದಿಂದಾಗಿ ಹಲವಾರು ಸರ್ಕಾರಿ ನೌಕರಿದಾರರು ಮತ್ತು ಪಿಂಚಣಿದಾರರು ಸರ್ಕಾರದ ಕಡೆಯಿಂದ ಲಾಭವನ್ನು ಪಡೆಯಲಿದ್ದಾರೆ. ಹೀಗಾಗಿ ಡಿಎ ಹೆಚ್ಚಳವು ವಾರ್ಷಿಕ ಆದಾಯವನ್ನು ಕೂಡ ಹೆಚ್ಚಳ ಮಾಡುತ್ತದೆ ಎಂದು ಹೇಳಬಹುದು.
ಅಧಿಕೃತ ಘೋಷಣೆ ಯಾವಾಗ?
ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ವರ್ಷದಂತೆಯೂ ಈ ಬಾರಿಯೂ ಕೂಡ ನವೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಅಂದರೆ ದೀಪಾವಳಿಯ ಸಂದರ್ಭದಲ್ಲಿ ಈ ಘೋಷಣೆಯು ಪ್ರಕಟಣೆಯಾಗಲಿದೆ ಎಂಬ ಸುಳಿವು ಸಿಕ್ಕಿದೆ. ಆದರೆ ಪರಿಷ್ಕರಣೆಯು ಜುಲೈ 1 ರಿಂದ ಜಾರಿಗೆ ಬರಲಿದೆ ಎಂಬ ಮಾಹಿತಿಯು ತಿಳಿದು ಬಂದಿದೆ.
ಎಸ್ ಬಿ ಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಹೊಸ ರೂಲ್ಸ್…!
ಡಿಎ ಹೆಚ್ಚಳವು ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ಆರ್ಥಿಕ ನೆರವಿನ ಹೆಚ್ಚಳವನ್ನು ಮಾಡಲು ಸಹಕರಿಸುತ್ತದೆ. ಅಧಿಕೃತ ಘೋಷಣೆಯ ನಂತರವೇ ಈ ಪರಿಷ್ಕರಣೆಯು ಅಂತಿಮ ವಾಗುತ್ತದೆ ಎಂದು ಹೇಳಬಹುದು. ಹಾಗಾಗಿ ಸರ್ಕಾರಿ ನೌಕರರು ಅಂತಿಮ ಅಧಿಕೃತ ಘೋಷಣೆಗಾಗಿ ಎದುರು ನೋಡುತ್ತಿದ್ದಾರೆ.