Free Laptop Scheme: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಸಿಗುತ್ತೆ! ಉಚಿತ ಲ್ಯಾಪ್ಟಾಪ್ ಯೋಜನೆ!
ನಮಸ್ಕಾರ ಎಲ್ಲರಿಗೂ, ಗ್ರಾಮೀಣ ಹಾಗೂ ನಗರ ಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ಡಿಜಿಟಲ್ ಉಪಕರಣ ಒದಗಿಸುವಂತಹ ಒಂದು ಒಳ್ಳೆಯ ಉದ್ದೇಶದಿಂದ ಏರ್ಟೆಲ್ ಫೌಂಡೇಶನ್ ವತಿಯಿಂದ ಉಚಿತ ಲ್ಯಾಪ್ಟಾಪ್ ನೀಡಲಾಗುತ್ತಿದ್ದು, ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.
ಉಚಿತ ಲ್ಯಾಪ್ಟಾಪ್ ಯೋಜನೆ (Free Laptop Scheme)
ಏರ್ಟೆಲ್ ಫೌಂಡೇಶನ್ ವತಿಯಿಂದ ಬಡ ಕುಟುಂಬಗಳಲ್ಲಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೂಲಕ ಉಚಿತವಾಗಿ ಲ್ಯಾಪ್ಟಾಪ್ ನೀಡುವಂತಹ ಉದ್ದೇಶವನ್ನು ಹೊಂದಿರುತ್ತದೆ. ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು ಯಾರಾಗಿರುತ್ತಾರೆ ಮತ್ತು ಬೇಕಾಗುವ ದಾಖಲೆಗಳು ಯಾವುವು ಎಂಬ ವಿವರವನ್ನು ಈ ಕೆಳಗಡೆ ನೋಡಿ ತಿಳಿದುಕೊಳ್ಳಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಭಾರತೀಯ ನಾಗರೀಕರಾಗಿರಬೇಕು.
- ಸರ್ಕಾರ ಮಾನ್ಯತೆ ನೀಡಿರುವಂತಹ ಬೋರ್ಡ್ ನಿಂದ ಪರೀಕ್ಷೆಯನ್ನು ಪಾಸ್ ಆಗಿರಬೇಕು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು.
- ಎಸ್ ಎಸ್ ಎಲ್ ಸಿ ಮತ್ತು 12ನೇ ತರಗತಿಯಲ್ಲಿ ಪಾಸ್ ಆಗಿರಬೇಕು.
- ಶಾಲಾ ಕಾಲೇಜಿನ ಗುರುತಿನ ಚೀಟಿ ಮತ್ತು ಅಂಕಪಟ್ಟಿ ಇರಬೇಕು.
(Free Laptop Scheme) ಬೇಕಾಗುವ ದಾಖಲೆಗಳು:
- ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಾರ್ಕ್ಸ್ ಕಾರ್ಡ್.
- ವಿದ್ಯಾರ್ಥಿಯ ಆಧಾರ್ ಕಾರ್ಡ್.
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
- ಆದಾಯ ಪ್ರಮಾಣ ಪತ್ರ.
- ನಿವಾಸದ ಪುರಾವೆ.
- ಬ್ಯಾಂಕ್ ಪಾಸ್ ಬುಕ್.
ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳು ಏರ್ಟೆಲ್ ಫೌಂಡೇಶನ್ ವತಿಯಿಂದ ಲಭ್ಯವಿರುವಂತಹ ಈ ಯೋಜನೆಯ ಲಾಭವನ್ನು ಪಡೆಯಬೇಕೆಂದರೆ ಮೊದಲು ಏರ್ಟೆಲ್ ಫೌಂಡೇಶನ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ನಂತರದಲ್ಲಿ ಉಚಿತ ಲ್ಯಾಪ್ಟಾಪ್ ಯೋಜನೆಯ ವಿಭಾಗಕ್ಕೆ ಹೋಗಿ ಅಪ್ಲೈ ಮಾಡುವಂತಹ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ತದನಂತರದಲ್ಲಿ ಓಪನ್ ಆಗುವಂತಹ ಫಾರಂನಲ್ಲಿ ವಿದ್ಯಾರ್ಥಿಯ ಸಂಪೂರ್ಣ ವಿವರಗಳನ್ನು ತುಂಬಬೇಕಾಗುತ್ತದೆ. ಕೇಳಲಾಗುವಂತಹ ಎಲ್ಲಾ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ. ಆಯ್ಕೆಯಾಗುವಂತಹ ವಿದ್ಯಾರ್ಥಿಗಳಿಗೆ ಸಂಪರ್ಕಿಸಲಾಗುತ್ತದೆ.
45 ಲಕ್ಷ ಅಕ್ರಮ ರೇಷನ್ ಕಾರ್ಡುಗಳು ರದ್ದು..? ಗೃಹಲಕ್ಷ್ಮಿಯರಿಗೂ ಸಂಕಟ!
ಈ ಉಚಿತ ಲ್ಯಾಪ್ಟಾಪ್ ಯೋಜನೆಗೆ ಆರ್ಥಿಕವಾಗಿ ದುರ್ಬಲವಾಗಿರುವಂತಹ ವಿದ್ಯಾರ್ಥಿಗಳಿಗೆ ಮತ್ತು ಡಿಜಿಟಲ್ ಸಾಧನವನ್ನು ಹೊಂದಿಲ್ಲದೆ ಇರುವಂತಹ ಕುಟುಂಬದ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ಹತ್ತನೇ ಮತ್ತು 12ನೇ ತರಗತಿಯಲ್ಲಿ ಶೇಕಡ 70% ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ…? ಪರಿಹಾರ ಇಲ್ಲಿದೆ!