Caste-Income Certificate: ಇನ್ಮುಂದೆ ಮೊಬೈಲ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಿರಿ! ಇಲ್ಲಿದೆ ಮಾಹಿತಿ!

Caste-Income Certificate: ಇನ್ಮುಂದೆ ಮೊಬೈಲ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಿರಿ! ಇಲ್ಲಿದೆ ಮಾಹಿತಿ!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವಂತಹ ಪ್ರಮುಖವಾದ ವಿಷಯವೇನೆಂದರೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಿಮಗೆಲ್ಲಾ ಗೊತ್ತಿರುವ ಹಾಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮತ್ತು ವಿದ್ಯಾರ್ಥಿಗಳಿಗೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಹೊಂದಲೇ ಬೇಕಾಗಿರುವಂತಹ ಅನಿವಾರ್ಯ ದಾಖಲೆಯಾಗಿದೆ. 

ಮೊಬೈಲ್ನಲ್ಲೇ ಜಾತಿ ಮತ್ತು ಆದಾಯ (Caste-Income Certificate) ಪ್ರಮಾಣ ಪತ್ರಕ್ಕೆ ಅರ್ಜಿ:

ಸದ್ಯಕ್ಕೆ ನಿಮಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕೆಂಬ ಆಯ್ಕೆ ಇದ್ದರೆ ನೀವು ನಾಡಕಚೇರಿ ಆನ್ಲೈನ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ನೀವು ಜಾತಿ ಮತ್ತು ಆದಾಯ ಪ್ರಮಾಣಕ್ಕೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಬೇಕಾಗುವಂತಹ ಪ್ರತಿಯೊಂದು ಮಾಹಿತಿಯನ್ನು ನೀವು ಕಾಣಬಹುದಾಗಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: 

  • ಆಧಾರ್ ಕಾರ್ಡ್ 
  • ರೇಷನ್ ಕಾರ್ಡ್ 
  • ಮೊಬೈಲ್ ನಂಬರ್ 
  • ಪಾಸ್ ಪೋರ್ಟ್ ಸೈಜ್ ಫೋಟೋ 

ಅರ್ಜಿ ಸಲ್ಲಿಸುವುದು ಹೇಗೆ?

  1. ನೀವು ನಿಮ್ಮ ಮೊಬೈಲ್ ನಲ್ಲಿ ನಾಡಕಚೇರಿ ವೆಬ್ಸೈಟ್ ಭೇಟಿ ನೀಡಬೇಕಾಗುತ್ತದೆ. 
  2. ನಂತರ ನೀವು ಆನ್ಲೈನ್ ಅಪ್ಲಿಕೇಶನ್ ಎಂಬ ಪುಟವನ್ನು ಆಯ್ಕೆ ಮಾಡಿಕೊಳ್ಳಿ ಅಪ್ಲೈ ಆನ್ಲೈನ್ ಕ್ಲಿಕ್ ಮಾಡಿಕೊಳ್ಳಿ. 
  3. ಮೊಬೈಲ್ ನಂಬರ್ ಗೆ ಬರುವಂತಹ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಿ.
  4. ಎಡಭಾಗದಲ್ಲಿ ಕಾಣಿಸುವಂತಹ ಹೊಸ ಅರ್ಜಿ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆಯ್ಕೆ ಮಾಡಿಕೊಳ್ಳಿ. 
  5. ಬೇಕಾಗುವಂತಹ ಡಾಕ್ಯುಮೆಂಟ್ಗಳ ವಿವರವನ್ನು ನೀಡಿ ಅಪ್ಲೋಡ್ ಮಾಡಿ. 
  6. ಯಾರ ಹೆಸರಿನಲ್ಲಿ ಪ್ರಮಾಣ ಪತ್ರ ಪಡೆಯಬೇಕೆಂಬ ಆಯ್ಕೆಯನ್ನು ಮಾಡಿಕೊಂಡು ನೀವು ಅರ್ಜಿ ಸಲ್ಲಿಸಿ. 

ರಾಜ್ಯದಲ್ಲಿ 13,000 ಶಿಕ್ಷಕರ ನೇಮಕಾತಿಗೆ ಅಧಿಸೂಚನೆ! ಇಲ್ಲಿದೆ ಇದರ ಬಗ್ಗೆ ಮಾಹಿತಿ!

ಈ ರೀತಿ ನೀವು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನಾಡಕಚೇರಿ ವೆಬ್ಸೈಟ್ ಕೆಲವೊಂದು ಸಲ ಗೂಗಲ್ ಕ್ರೋಮ್ ನಲ್ಲಿ ಓಪನ್ ಆಗದೇ ಇರುವುದರಿಂದ ಮೋಜಿಲ್ಲ ಫರ್ಫಾಕ್ಸ್ ಬಳಸುವುದು ಉತ್ತಮವಾದ ಆಯ್ಕೆಯಾಗಿರುತ್ತದೆ. ಅದರಲ್ಲಿ ಉತ್ತಮವಾದ ಸ್ಪೀಡ್, ನೀವು ಕಾಣಬಹುದಾಗಿರುತ್ತದೆ.

WhatsApp Group Join Now

1 thought on “Caste-Income Certificate: ಇನ್ಮುಂದೆ ಮೊಬೈಲ್ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಿರಿ! ಇಲ್ಲಿದೆ ಮಾಹಿತಿ!”

  1. “ಅತ್ಯಂತ ಉಪಯುಕ್ತ ಮಾಹಿತಿ! ಈಗ ಮೊಬೈಲ್ ಮೂಲಕವೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವುದು ಬಹಳ ಸುಲಭವಾಗಿದೆ. ಶಿಕ್ಷಣದ ಈ ಲೇಖನ ಎಲ್ಲರಿಗೂ ಮಾರ್ಗದರ್ಶನವಾಗುತ್ತದೆ. ಧನ್ಯವಾದಗಳು!”

    Reply

Leave a Comment