Airtel Scholarship: ವಿದ್ಯಾರ್ಥಿಗಳಿಗೆ ಏರ್ಟೆಲ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ವೇತನ ಸಿಗುತ್ತಿದ್ದು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಪೂರ್ತಿ ವಿವರವನ್ನು ಈ ಕೆಳಗಡೆ ನೀಡಲಾಗಿದೆ ನೋಡಿ.
ಹೌದು ಸ್ನೇಹಿತರೆ, ಭಾರತೀಯ ಏರ್ಟೆಲ್ ಸ್ಕಾಲರ್ಶಿಪ್ ಪ್ರೋಗ್ರಾಮ್ ವತಿಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ವೈವಿಧ್ಯಮಯ ಮತ್ತು ಸಾಮಾಜಿಕ ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಹಾಗೂ ಹೆಣ್ಣು ಮಕ್ಕಳೆಯನ್ನು ಕೇಂದ್ರೀಕರಿಸಿ ಭವಿಷ್ಯದಲ್ಲಿ ತಂತ್ರಜ್ಞಾನದ ನಾಯಕರಾಗಲು ಬೆಂಬಲಿಸುವ ಗುರಿಯಿಂದ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಭಾರತಿ ಏರ್ಟೆಲ್ ಸ್ಕಾಲರ್ಶಿಪ್:
ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಇತ್ತೀಚಿನ NIRF ಶ್ರೇಯಾಂಕದ ಆಧಾರಿತವಾಗಿ ಇಂಜಿನಿಯರಿಂಗ್ ನಲ್ಲಿ ಪದವಿಪೂರ್ವ ಮತ್ತು ಐದು ವರ್ಷಗಳ ಸಂಯೋಜಿತ ಕೋರ್ಸ್ ಗಳಿಗೆ ದಾಖಲಾಗಿರುವಂತಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಈ ಕುರಿತಾದ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಯು ಭಾರತೀಯ ನಾಗರಿಕರಾಗಿರಬೇಕು.
- ವಿದ್ಯಾರ್ಥಿಯ ಪೋಷಕರ ಆದಾಯ ಅಂದರೆ ವಾರ್ಷಿಕ ಆದಾಯ 8.5 ಲಕ್ಷ ಮೇಲಿರಬಾರದು.
- ಹೆಣ್ಣು ಮಕ್ಕಳಿಗೆ, ಅಂಗವಿಕಲರಿಗೆ ಮತ್ತು ಟ್ರಾನ್ಸ್ ಟೆಂಡರ್ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ.
- ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ಭಾರತೀಯ ಏರ್ಟೆಲ್ ಪೌಂಡೇಶನ್ ವತಿಯಿಂದ ಬೆಂಬಲಿತವಾಗಿರುವ ಉದ್ದೇಶಗಳಿಗಾಗಿ ಬೇರೆ ಯಾವುದೇ ಸ್ಕಾಲರ್ಶಿಪ್ ಅನ್ನು ಪಡೆದಿರಬಾರದು.
- ಇನ್ನಷ್ಟು ಹೆಚ್ಚಿನ ಅರ್ಹತಾ ಮಾನದಂಡಗಳ ವಿವರಗಳಿಗಾಗಿ ಅಧಿಕೃತ ಜಾಲತಾಣ ಭೇಟಿ ನೀಡಿ.
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಈ ಭಾರತಿ ಏರ್ಟೆಲ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬೇಕೆಂದು ಬಯಸಿದರೆ ಮತ್ತು ಮೇಲೆ ನೀಡಿರುವಂತಹ ಅರ್ಹತೆಗಳನ್ನು ನೀವು ಪೂರೈಸಿದ್ದಾರೆ ಈ ಕೆಳಗಿನ ಜಾಲತಾಣವನ್ನು ಬಳಸಿಕೊಂಡು ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಲಿಂಕ್
https://www.buddy4study.com/page/bharti-airtel-scholarship
ಮೇಲೆ ಕೊಟ್ಟಿರುವಂತಹ ಅಧಿಕೃತ ಜಾಲತಾಣವನ್ನು ಬಳಸಿಕೊಂಡು ಭಾರತೀ ಏರ್ಟೆಲ್ ಫೌಂಡೇಶನ್ ವತಿಯಿಂದ ಲಭ್ಯವಿರುವಂತಹ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಜೂನ್ 31, 2025 ಕೊನೆಯ ದಿನಾಂಕವಾಗಿರುತ್ತದೆ.