Aadhaar Card: ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು! ಹೊಸ ಆ್ಯಪ್ ಬಿಡುಗಡೆ!
ನಮಸ್ಕಾರ ರಾಜ್ಯದ ಜನತೆಗೆ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಇನ್ಮುಂದೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಓಡಾಡುವಂತಹ ಅವಶ್ಯಕತೆ ಇರುವುದಿಲ್ಲ. ಯಾಕೆಂದರೆ ಸರ್ಕಾರವು ಈ ಒಂದು ಅಲೆದಾಟಕ್ಕೆ ಮುಕ್ತಾಯವನ್ನು ನೀಡಿದೆ. ನವೆಂಬರ್ ನಲ್ಲಿ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.
2025ರ ಮುಂಗಾರು ಬೆಳೆ ವಿಮೆ! ಕರ್ನಾಟಕದ ರೈತರಿಗೂ ಕೂಡ ಹಣ ಜಮಾ!
ಅಪ್ಲಿಕೇಶನ್ ಬಿಡುಗಡೆ ಆದ ನಂತರ ಆಧಾರ್ ಕಾರ್ಡಿನಲ್ಲಿ ಹೆಸರು ವಿಳಾಸ ಮತ್ತು ಇನ್ನಿತರ ಮೂಲಭೂತ ಮಾಹಿತಿಗಳನ್ನು ತಿದ್ದುಪಡಿ ಮಾಡುವಂತಹ ಅವಕಾಶವನ್ನು ಮೊಬೈಲ್ ನಲ್ಲಿ ಹೊಂದುತ್ತೀರಾ ಎಂಬ ಮಾಹಿತಿಯು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಪೂರ್ತಿ ಸ್ಪಷ್ಟನೆ ಇಲ್ಲಿದೆ ನೋಡಿ.
ಆಧಾರ್ ಕಾರ್ಡ್ (Aadhaar Card) ಅಪ್ಡೇಟ್ ಹೊಸ ಬಿಡುಗಡೆ:
ಮೊಬೈಲ್ ನಿಂದ ನೇರವಾಗಿ ಓಟಿಪಿ ದೃಢೀಕರಣದ ಮೂಲಕ ಈ ಅಪ್ಲಿಕೇಶನ್ ಮೂಲಕ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದಾಗಿರುತ್ತದೆ. ಈ ಅಪ್ಲಿಕೇಶನ್ ನಲ್ಲಿ ಜನ್ಮ ದಿನಾಂಕ ವಿಳಾಸ ಮತ್ತು ಲಿಂಗದ ಬದಲಾವಣೆಯನ್ನು ಮಾಡಿಸಿಕೊಳ್ಳಬಹುದಾಗಿರುತ್ತದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬೆರಳಚ್ಚು ಮತ್ತು ಐರಿಸ್ ಅಪ್ಡೇಟ್ ಇದ್ದರೆ ಮಾತ್ರ ನೀವು ಕಚೇರಿಗಳಿಗೆ ಭೇಟಿ ನೀಡಿ ಆಧಾರ ಅಪ್ಡೇಟ್ ಮಾಡಿಸಿಕೊಳ್ಳಬಹುದಾಗಿದೆ.
ಈ ಒಂದು ಹೊಸ ಅಪ್ಲಿಕೇಶನ್ ನಲ್ಲಿ ಐದರಿಂದ ಹದಿನೈದು ವರ್ಷದ ಒಳಗಿನ ಪ್ರತಿಯೊಬ್ಬರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಫೋಟೋ ಫಿಂಗರ್ ಪ್ರಿಂಟ್ ಮತ್ತು ಇನ್ನಿತರ ಬದಲಾವಣೆಗಳಿಗೆ ರೂ. 50 ಇವರಿಗೆ ಶುಲ್ಕವನ್ನು ವಿಧಿಸಬಹುದು ಎಂಬ ಮಾಹಿತಿ ಇದೆ.
ಈ ಅಪ್ಲಿಕೇಶನ್ ನಲ್ಲಿ ಅಗತ್ಯವಿರುವ ಮಾಹಿತಿಗಳನ್ನು ಬದಲಾವಣೆ ಮಾಡಿಕೊಳ್ಳುವ ಜನರಿಗೆ ಓಟಿಪಿ ಮುಖಾಂತರ ಈ ಅಪ್ಲಿಕೇಶನ್ ಬಳಕೆಯಾಗಲಿದೆ. ಏನು ವಿಕರಣ ಪ್ರಕ್ರಿಯೆಯು ಬಹಳ ವೇಗವಾಗಿ ಕೆಲಸ ಮಾಡಲಿದೆ ಎಂಬ ಮಾಹಿತಿಯು ತಿಳಿದು ಬಂದಿರುತ್ತದೆ.
ಅಪ್ಲಿಕೇಶನ್ ಬಿಡುಗಡೆ ಯಾವಾಗ.?
ಈ ಅಪ್ಲಿಕೇಶನ್ ನವೆಂಬರ್ ನಲ್ಲಿ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯು ಹರಿದಾಡುತ್ತಿದ್ದು, ಬಿಡುಗಡೆಯಾದ ನಂತರ ನೀವು ಈ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಮತ್ತು ಆಪ್ ಸ್ಟೋರ್ ನಿಂದ ಪಡೆಯಬಹುದಾಗಿರುತ್ತದೆ.
ಹತ್ತನೇ ತರಗತಿ ಪರೀಕ್ಷೆ 3 ರ ವೇಳಾಪಟ್ಟಿ ಬಿಡುಗಡೆ!
ಆಧಾರ್ ಕಾರ್ಡ್ ಪ್ರತಿಯೊಬ್ಬರೂ ಕೂಡ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಿದಾಗ ಆಧಾರ್ ಕಾರ್ಡ್ ಸಂಬಂಧಿತ ಅಪ್ಡೇಟ್ಗಳು ಇನ್ನಷ್ಟು ಸುಲಭವಾಗಿ ನಡೆಯಲಿವೆ ಎಂದು ಹೇಳಬಹುದಾಗಿದೆ. ಹೆಚ್ಚು ಸುರಕ್ಷಿತ ಮತ್ತು ಹೆಚ್ಚು ವೇಗದಿಂದ ನೀವು ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಮಾಡಿಕೊಳ್ಳುವಂತಹ ಅವಕಾಶವನ್ನು ಪಡೆಯುತ್ತೀರಾ.