Land Loan: ರೈತರಿಗೆ ಭೂಮಿ ಖರೀದಿಸಲು ಸಾಲ!
ಎಲ್ಲರಿಗೂ ನಮಸ್ಕಾರ ಇದೀಗ ಕರ್ನಾಟಕ ಬ್ಯಾಂಕ್ ವತಿಯಿಂದ ಕೃಷಿ ಭೂಮಿಯನ್ನ ಪಡೆಯಲು ಇದೀಗ ಸಾಲವನ್ನು ನೀಡಲಾಗಿರುತ್ತದೆ ಈ ಒಂದು ಯೋಜನೆಯನ್ನು ಕರ್ನಾಟಕ ಬ್ಯಾಂಕ್ ಬಿಡುಗಡೆ ಮಾಡಿದ್ದು ಈ ಒಂದು ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಲೇಖನವನ್ನು ಕೊನೆತನಕ ಓದಿ.
Land Loan: ರೈತರಿಗೆ ಭೂಮಿ ಖರೀದಿಸಲು ಸಾಲ!
ಕರ್ನಾಟಕ ಬ್ಯಾಂಕ್ ನಿಂದ ಕೃಷಿ ಭೂಮಿ ಯೋಜನೆ ಅಡಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವಂತಹ ರೈತರಿಗೆ ತಮ್ಮ ಒಂದು ಸ್ವಂತ ಜಮೀನನ್ನ ಖರೀದಿ ಮಾಡಲು ಸಾಲವನ್ನ ಒದಗಿಸಲಾಗುತ್ತದೆ. ಒಂದು ಯೋಜನೆಯಲ್ಲಿ ಸಾಲವನ್ನು ಪಡೆಯಲು ಯಾರು ಅರ್ಜಿ ಸಲ್ಲಿಸಬಹುದಾಗಿದೆ ಬೇಕಾಗುವ ದಾಖಲೆಗಳು ಯಾವ್ಯಾವು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೆಳಗೆ ನೀಡಲಾಗಿರುತ್ತದೆ.
ಇರಬೇಕಾದ ಅರ್ಹತೆಗಳು
- ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವ ಯಾವ ಅರ್ಹತೆಗಳು ಇರಬೇಕು ಕೆಳಗೆ ಮಾಹಿತಿ ನೀಡಲಾಗಿದೆ
- ಅರ್ಜಿ ಸಲ್ಲಿಸುವ ರೈತನು ಇತರೆ ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿ ಪಾವತಿ ಮಾಡದೆ ಇರಬಾರದು
- ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
- ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು
- ಕರ್ನಾಟಕ ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿರಬೇಕು
ಸಾಲ ಪಡೆಯಲು ಬ್ಯಾಂಕ್ನ ನಿಯಮಗಳು
- ಖರೀದಿಸಲು ಉದ್ದೇಶಿಸಲಾದಂತಹ ಕೃಷಿ ಭೂಮಿಯನ್ನು ಕಡ್ಡಾಯವಾಗಿ ಬ್ಯಾಂಕಿನಲ್ಲಿ ಅಡಮಾನ ಇರಿಸಬೇಕಾಗುತ್ತದೆ
- ಸಾಲವನ್ನು ಪಡೆಯಲು ಶ್ಯೂರಿಟಿ ಒದಗಿಸುವುದು ಕಡ್ಡಾಯವಾಗಿರುತ್ತದೆ
ಸಾಲದ ಮಿತಿ ಎಷ್ಟು…?
- ಕನಿಷ್ಠ ಸಾಲದ ಮಿತಿ 50,000
- ಗರಿಷ್ಠ ಸಾಲದ ಮಿತಿ 30 ಲಕ್ಷ
ಅರ್ಜಿ ಸಲ್ಲಿಸುವ ವಿಧಾನ
ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕರ್ನಾಟಕ ಬ್ಯಾಂಕ್ ಗೆ ನೀಡಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಚರ್ಚೆ ಮಾಡುವುದರ ಮೂಲಕ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ಬ್ಯಾಂಕ್ ಖಾತೆಯ ವಿವರ
- ಆದಾಯ ತೆರಿಗೆ ಲಭ್ಯವಿದ್ದಲ್ಲಿ
- ಜಮೀನಿನ ಅಧಿಕೃತ ದಾಖಲೆಗಳ
- ಪ್ಯಾನ್ ಕಾರ್ಡ್
WhatsApp Group
Join Now