Ration Card List: ಪಡಿತರ ಚೀಟಿ ಪಟ್ಟಿ ಬಿಡುಗಡೆ ಆಗಿದೆ! ಈಗಲೇ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ!
ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವಂತಹ ಪ್ರಮುಖವಾದ ವಿಷಯವೇನೆಂದರೆ ನಿಮಗೆಲ್ಲ ಗೊತ್ತಿರುವ ಹಾಗೆ ಪ್ರಮುಖ ದಾಖಲೆಗಳಲ್ಲಿ ಒಂದಾಗಿರುವಂತಹ ರೇಷನ್ ಕಾರ್ಡ್ ಈಗಾಗಲೇ ರಾಜ್ಯದಲ್ಲಿ ತಿಳಿದಿರುವ ಹಾಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿತ್ತು.
ಪಡಿತರ ಚೀಟಿ ಪಟ್ಟಿ (Ration Card List) ಬಿಡುಗಡೆ:
ಇದೀಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ತಾತ್ಕಾಲಿಕವಾದ ತಡೆಯನ್ನು ನೀಡಲಾಗಿದೆ. ಗ್ರಾಮವಾರು ರೇಷನ್ ಕಾರ್ಡ್ ನ ಪಟ್ಟಿ ಬಿಡುಗಡೆಯಾಗಿದ್ದು ನಿಮ್ಮ ಹೆಸರು ಇದರಲ್ಲಿ ಇದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಕೆಳಗೆ ನೀಡಿರುವಂತಹ ಹಂತಗಳನ್ನು ಅನುಸರಿಸಿ ನೀವು ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.
ನಿರುದ್ಯೋಗಿಗಳಿಗೆ ಸರಕಾರದ ವತಿಯಿಂದ ₹3000/- ಬೇಗ ಅರ್ಜಿ ಸಲ್ಲಿಸಿ!
ಕೆಲವು ದಿನಗಳಿಂದ ರಾಜ್ಯದಲ್ಲಿ ಅರ್ಹತೆ ಇಲ್ಲದಂತವರು ರೇಷನ್ ಕಾರ್ಡನ್ನು ಹೊಂದಿದ್ದಾರೆ ಎಂಬ ಆರೋಪಗಳಿಂದ ಎಚ್ಚೆತ್ತುಕೊಂಡ ಸರ್ಕಾರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವ ಕೆಲಸವನ್ನು ಬ್ರೇಕ್ ಮಾಡಿದೆ. ರೇಷನ್ ಕಾರ್ಡ್ ಗೆ ಯಾರು ಅರ್ಹರಾಗಿರುತ್ತಾರೆ ಅಂತವರಿಗೆ ಅನುಕೂಲ ಮಾಡಿಕೊಡಲು ಸರ್ಕಾರವು ನಿರ್ಧಾರ ಮಾಡಿದೆ.
ಇದರ ಜೊತೆಗೆ ಗ್ರಾಮವಾರು ಪಡಿತರ ಚೀಟಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿರುತ್ತದೆ ಇದರಲ್ಲಿ ನಿಮ್ಮ ಹೆಸರೇನಾದರೂ ಸೇರಿದೆ ಎಂಬುದನ್ನು ನೀವು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಇದರ ಬಗ್ಗೆ ಮಾಹಿತಿ ಈ ಕೆಳಗಡೆ ನೀಡಲಾಗಿದೆ ನೋಡಿ.
ನೀವು ನಿಮ್ಮ ನ್ಯಾಯಬೆಲೆ ಅಂಗಡಿ ಮತ್ತು ಗ್ರಾಮ ಪಂಚಾಯಿತಿಗೆ ಅಲೆದಾಡುವ ಅವಶ್ಯಕತೆ ಇಲ್ಲದೆ ಅಧಿಕೃತ ಜಾಲತಾಣದ ಮೂಲಕ ಪಟ್ಟಿಯನ್ನು ಪರಿಶೀಲನೆ ಮಾಡಬಹುದಾದಂತಹ ಅವಕಾಶವನ್ನು ನೀವು ಹೊಂದಿದ್ದೀರಾ. ರೇಷನ್ ಕಾರ್ಡ್ ತಿದ್ದುಪಡಿಯ ಸ್ಥಿತಿಯನ್ನು ಕೂಡ ನೀವು ಪರಿಶೀಲಿಸಿಕೊಳ್ಳುವಂತಹ ಅವಕಾಶವನ್ನು ಪಡೆದಿದ್ದೀರಿ.
ಪಡಿತರ ಚೀಟಿ ಡೌನ್ಲೋಡ್ ಮಾಡುವ ವಿಧಾನ:
ನೀವು ಪಡಿತರ ಚೀಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕೆಂದರೆ ಆಹಾರ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಮತ್ತು ಅಲ್ಲಿ ನಿಮಗೆ ಈ ಸರ್ವಿಸಸ್ ಎಂಬ ಆಯ್ಕೆಯಲ್ಲಿ ಈ ರೇಷನ್ ಕಾರ್ಡ್ ಡೌನ್ಲೋಡ್ ಆಯ್ಕೆಯನ್ನು ಮಾಡಿಕೊಳ್ಳಿ.
ನಂತರ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಿ ಆಧಾರ್ಗೆ ಲಿಂಕ್ ಇರುವಂತಹ ಮೊಬೈಲ್ ನಂಬರಿಗೆ ಬರುವ ಓಟಿಪಿಯನ್ನು ನಮೂದಿಸಿ ಪಿಡಿಎಫ್ ನಲ್ಲಿ ರೇಷನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.
ನೀವೇನಾದರೂ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರೆ ಅಧಿಕೃತ ವೆಬ್ಸೈಟ್ನಲ್ಲಿ ಹೊಸ ಅಥವಾ ಮೊದಲೇ ಇರುವಂತಹ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ಒಟಿಪಿ ಅಥವಾ ಓಟಿಪಿ ಅಲ್ಲದೆ ಇರುವಂತಹ ಆಯ್ಕೆಯನ್ನು ನೀವು ಆಯ್ಕೆ ಮಾಡಿಕೊಂಡು ರೇಷನ್ ಕಾರ್ಡ್ ತಿದ್ದುಪಡಿಯ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಗ್ರಾಮ ಪಂಚಾಯಿತಿ ಮತ್ತು ನಿಮ್ಮ ಹತ್ತಿರವಿರುವಂತಹ ನ್ಯಾಯಬೆಲೆ ಅಂಗಡಿಯ ಅಲೆದಾಟವಿಲ್ಲದೆ ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಹಾಗೂ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ.